‘ಹೂ ಮನಸೇ’ ಮುಕ್ತಾಯ
Posted date: 26 Wed, Oct 2016 – 12:47:29 PM

ಬಿ.ಎಸ್.ಕೆ. ಸೃಷ್ಠಿ ಕ್ರಿಯೇಷನ್ಸ್ ಲಾಂಛನದಲ್ಲಿ ನಾಯಕರಹಳ್ಳಿ ಬೋರೇಗೌಡ ಬಿ.ಜೆ. ಅವರು ನಿರ್ಮಿಸುತ್ತಿರುವ ಚಿತ್ರ ‘ಹೂ ಮನಸೇ’ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ ಅವರೊಂದಿಗೆ ಸರಿಸುಮಾರು ನಲವತ್ತು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ಕೆಲಸ ಮಾಡಿರುವವರು ಲಿಂಗರಾಜ ಕಗ್ಗಲ್. ಸದ್ಯ ಲಿಂಗರಾಜ್ ಕಗ್ಗಲ್ ಅವರೇ ನಿರ್ದೇಶಿಸಿರುವ ‘ಹೂ ಮನಸೇ’ ಚಿತ್ರ ಚಿತ್ರೀಕರಣ ಪೂರೈಸಿ ಡಬ್ಬಿಂಗ್ ಕಾರ್ಯ ನಡೆಸುತ್ತಿದೆ. ಈ ಚಿತ್ರದ ಚಿತ್ರೀಕರಣ ಮೈಸೂರು, ನಂಜನಗೂಡು ಸುತ್ತಮುತ್ತ ಚಿತ್ರೀಕರಿಸಲಾಗಿದೆ. ಮಾಸ್ಟರ್ ಭರತ್, ಬೇಬಿ ಸೃಷ್ಠಿ, ಮಾಸ್ಟರ್ ರಾಹುಲ್, ಮಾಸ್ಟರ್ ಕಾರ್ತಿಕ್, ಮಾಸ್ಟರ್ ಪ್ರೀತಂ ಮತ್ತು ರಂಜಿತಾ ಈ ಚಿತ್ರದ ತಾರಾಗಣದಲ್ಲಿದ್ದಾರೆ. ಅಲ್ಲದೆ, ಹಿರಿಯ ನಟರಾದ ರಮೇಶ್ ಭಟ್, ಚಿತ್ರಾ ಶೆಣೈ, ವಾಣಿಶ್ರೀ, ಸಂಗೀತಾ, ಡಿಂಗ್ರಿ ನಾಗರಾಜ್, ಆಡುಗೋಡಿ ಶ್ರೀನಿವಾಸ್, ತೆನಾಲಿ ಆನಂದ್ ಮುಂತಾದವರು ಅಭಿನಯಿಸಿದ್ದಾರೆ. ಕಥೆ, ಚಿತ್ರಕತೆ, ಸಾಹಿತ್ಯ, ಟಿ.ಸಿ., ಲಿಂಗರಾಜ್ ಬಳ್ಳಾರಿ, ಮತ್ತು ಟಿ.ಸಿ ರಾಮಚಂದ್ರ ಸಂಭಾಷಣೆ, ವಿನಯ್ ಮೈಸೂರು ಸಂಗೀತ, ರಾಜೇಶ್ ರಾಮನಾಥನ್ ಹಿನ್ನೆಲೆ ಸಂಗೀತ, ಬಿ.ಎಲ್. ಬಾಬು ಛಾಯಾಗ್ರಹಣ, ಮದನ್, ಹರಿಣಿ ನೃತ್ಯ, ಬಾಬುಖಾನ್ ಕಲೆ, ಆಕಾಶ್ ಚವ್ಹಾಣ ಸಹ ನಿರ್ದೇಶನ, ಮುನಿರಾಜ್ ಸಂಕಲನ, ಥಾಮಸ್ ನಿರ್ಮಾಣ, ನಿರ್ವಹಣೆ, ಜಿ.ಎಲ್ ಕುಮಾರಿ ಬೋರೇಗೌಡ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed